`ಚಂದ್ರಲೇಖ` ರೇ-ರೆಕಾರ್ಡಿಂಗ್ ಸಿದ್ದತೆ
Posted date: 18 Mon, Nov 2013 – 11:24:29 AM

ಬಹುತೇಕ ನಾಲ್ಕು ಕಲಾವಿದರುಗಳೆ ಇರುವ ‘ಚಂದ್ರಲೇಖ’ ತೆಲುಗಿನ ‘ಪ್ರೇಮ ಚಿತ್ರ ಕಥಮ್’ ಅವತರಿಣಿಕೆ ಕನ್ನಡದಲ್ಲಿ ಹೆಸರಾಂತ ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್ ಅವರ ನಿರ್ದೇಶನದಲ್ಲಿ ಪೂರ್ತಿಗೊಂದು ಇದೀಗ ರೇ=ರೆಕಾರ್ಡಿಂಗ್ ಹಂತಕ್ಕೆ ಬಂದು ತಲುಪಿದೆ. ಈ ತಿಂಗಳ ಅಂತ್ಯದಲ್ಲಿ ‘ಟೀಸರ್’ ಬಿಡುಗಡೆ ಮಾಡಿ, ಮುಂದಿನ ತಿಂಗಳು ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮ ಅದಾದ ನಂತರವೇ ಚಿತ್ರದ ಬಿಡುಗಡೆ ಎಂದು ನಿರ್ಮಾಪಕ ಶ್ರೀಧರ್ ರೆಡ್ಡಿ ಅವರು ತಿಳಿಸಿದ್ದಾರೆ.

‘ಚಂದ್ರಲೇಖ’ ಚಿತ್ರದ ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವತ್ಸವ್, ಸಾಧು ಕೋಕಿಲ ಹಾಗೂ ನಾಗಶೇಖರ್ ಪ್ರಮುಖ ಪಾತ್ರದಾರಿಗಳು. ಬಹುತೇಕ ರಾತ್ರಿ ಎಫ್ಫೆಕ್ಟ್ ಅಲ್ಲಿ ಒಂದೇ ಮನೆಯಲ್ಲಿ ಚಿತ್ರೀಕರಣ ಪರದೆಯ ಮೇಲೆ ಕಾಣುವುದು. 20 ರಷ್ಟು ಹೊರಾಂಗಣದಲ್ಲಿ ಚಿತ್ರೀಕರಣವಾಗಿದೆ.

ತೆಲುಗಿನಲ್ಲಿ ಪ್ರಭಾಕರ್ ರೆಡ್ಡಿ ಅವರು ನೀಡಿದ ವಸ್ತು ಹಾಗೂ ಕನ್ನಡದಲ್ಲಿ ಬಹಳ ಮೆಚ್ಚುಗೆಯ ನಿರ್ದೇಶಕ ಸಿಕ್ಕಿರುವುದು ನನಗೆ  ಸಹಾಯವಾಗಿದೆ ಎನ್ನುವ ಶ್ರೀಧರ್ ರೆಡ್ಡಿ ಅವರು ‘ಫನ್, ಫಿಯರ್ ಹಾಗೂ ರೊಮಾನ್ಸ್’ ಚಿತ್ರದ ಮುಖ್ಯಾಂಶಗಳು ಎನ್ನುತ್ತಾರೆ.

ಜೆ ಬಿ ಈ ಚಿತ್ರದ ಸಂಗೀತ ನಿರ್ದೇಶಕರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed